ತುಂಬಿಕೊಂಡೆನಾ …
ಚೆಲ್ಲಿಕೊಂಡೆನಾ …
ಕಳೆದೂ ಕಳೆದೂ …
ಪಡೆದುಕೊಂಡೆನಾ …
(ನನ್ನದೇ ಹಾಡೊಂದರ ಸಾಲುಗಳಿವು)
ಒಮ್ಮೊಮ್ಮೆ ಬದುಕು ಕನಸಿನಂತೆ … ಒಮ್ಮೊಮ್ಮೆ ಕನಸು ಬದುಕಿನಂತೆ. ಈ ಕಥೆಗಳು, ಈ ಹಾಡುಗಳು, ಈ ಬಣ್ಣಗಳು ತಾವಾಗೇ ಒಲಿದವುಗಳು. ಹಾಗಾಗಿ ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನು ಹೇಳಿಕೊಳ್ಳಲಿ …. ಘನವಾಗಿ ಹೇಳಿಕೊಳ್ಳುವುದು, ಅದೂ ನನ್ನ ಬಗ್ಗೆಯೇ… ಅದು ಸ್ವಲ್ಪ ಕಷ್ಟದ ಕೆಲಸ ನನಗೆ ಯಾವಾಗಲೂ.
ಒಂದಿಷ್ಟು ಕಥೆಗಳು, ಕವಿತೆಗಳು, ಕೆಲ ವರ್ಷಗಳ ಹಿಂದೆಯೇ ನನ್ನ ಕೈ ಹಿಡಿದವು. ಇತ್ತೀಚಿನ ದಿನಗಳಲ್ಲಿ Lyricist ಎನ್ನುವ ಹೊಸ ಅವತಾರವು, Painting ಎಂಬ ಹೊಸ ಹವ್ಯಾಸವು ನನಗೆ ಹೊಸ ಬಣ್ಣಗಳ ಲೋಕಕ್ಕೆ ಪರಿಚಯಿಸಿತು. ತರಬೇತಿ, ಅಧ್ಯಯನದ ಚೌಕಟ್ಟಿಗೆ ಒಳಪಡದ ನನ್ನದು ಮುಕ್ತ ಧಾಟಿ… ಒಂದೊಂದೇ ಚಿತ್ರ, ಒಂದೊಂದೇ ಹಾಡು, ಒಲಿಯುತ್ತ ಬಂದಂತೆ ಬರೆದಿದ್ದೇನೆ. ನನ್ನ ಭಾವಲೋಕದ ಬಣ್ಣದ ಖಾಸಗಿ ಲೋಕದ ಅಭಿವ್ಯಕ್ತಿ ಈ ಪುಟದಲ್ಲಿ ಅರಳಿದೆ. ಶ್ಯಾಮಸ್ವರ ಅಬ್ಬರವಿಲ್ಲದ ಖಾಸಗಿತನವನ್ನು ಇನ್ನಿಲ್ಲದಂತೆ ಪ್ರೀತಿಸುವ ಒಬ್ಬ ಅತಿ ಸಾಧಾರಣಳ ಸರಳ ಮತ್ತು ಮುಕ್ತ ಅಭಿವ್ಯಕ್ತಿಯ ತಾಣ.
ಈ ಹಾದಿಯಲ್ಲಿ, ಈ ಯಾತ್ರೆಯಲ್ಲಿ, ನಿಮ್ಮೆಲ್ಲರ ಪ್ರೀತಿ, ಸಹಕಾರ, ಪ್ರೋತ್ಸಾಹ ನನ್ನ ಜೊತೆಯಿರಲಿ… ನನ್ನನ್ನು ನಾನು ಮತ್ತೂ ಒಂದಿಷ್ಟು ಹೊಸ ಪಾತ್ರಗಳಲ್ಲಿ, ರೂಪಗಳಲ್ಲಿ ಅನ್ವೇಷಿಸುವಂತೆ ಪ್ರೇರೇಪಿಸಲಿ… ಎಂದು ಆಶಿಸುತ್ತೇನೆ.
ಪ್ರೀತಿಯೊಂದಿಗೆ..
thumbikondénā
chellikondénā
kaḷedū kaḷedū
paḍedukonḍenā
(Lines from my own song)
Sometimes, your Life is a Dream… And at other times, the Dream is your Life. These stories, these songs, these colors came to me themselves. Therefore, what should I talk about me… Talking big, about myself, is a bit of a difficult talk always.
Some stories and poems embraced me a few years ago. Recently my new avatār of a Lyricist and this new hobby of Painting have introduced me to a world of new colors. Not restricted by training or processes I write and draw with a free tone. I created each painting and each song, as they showed up in me. Emotional thoughts take on the colors of my creative world here. Shyāmaswara is a portal of a simple person that loves free expression of unbridled privacy.
Along this path, on this journey, I hope that your love, support and encouragement will motivate me to discover myself in a lot more
newer roles.
Lots of Love.