0

ವಿಷವ್ಯೂಹ

ವಿಷವ್ಯೂಹ

ಎಡವದಂಥವರು 

ಎಗರಾಡಿ,

ಬಲವಂತರಂಥವರು 

ಬಡಿದಾಡಿ…

ಆ ವಾದಿ, ಈ ವಾದಿ, ಪ್ರತಿವಾದಿ

ಎಂಥೆಂಥ ವ್ಯಾಧಿ!


ಯಾವ್ಯಾವುದೋ ಕಿಚ್ಚಿಗೆ 

ಯಾರ್ಯಾರದೋ 

ತಲೆ ಕೊಡುವ ಹುಚ್ಚು!

ಅಸಲಿಗೆ ಏನೂ ಅಲ್ಲದ್ದೂ 

ರಣಗಾಯವಾಗುವಂತೆ ಚುಚ್ಚು!


ಹಲ್ಲು ಕಿಸಿಯಲೇಬೇಕು 

ಎಲ್ಲರ ಚಾದರದೊಳಗೆ ನುಸುಳಿ.

ಮತ್ಯಾರದೋ ಹಗೆಗಳಿಗೆ 

ಕತ್ತಿ ಮಸೆಯುವುದೀಗ ಸುಭಗ ಚಾಳಿ 

ಜಾತಿ ಪಾತಿಯ ಹಪಾಹಪಿ…

ಮುಕ್ತನಾ ವಿರೋಧಿಸುವ ಮೇಧಾವಿ?

ಹೇಸಿಗೆಗಳ ಬಹಿರಂಗ ಆಟವಿಲ್ಲಿ!


ದಿಗಿಲು ಬರುವಂತಿದೆ ಆತ್ಮರತಿ

ಜೊಲ್ಲು ಈಗ ಕಣ್ಣಲ್ಲೂ 

ಸುರಿಯುತ್ತದೆ ಬಿಡಿ!

ಕೆಟ್ಟ ರುಚಿ… ಮತ್ತು 

ಭಂಡ ಸಮಜಾಯಿಷಿ.


ಮಾತುಗಳ ಸದ್ದು 

ಗರಗಸದಂತೆ ಕೊಯ್ಯುತ್ತದೆ ಮೌನ 

ಮತ್ತು ಲಜ್ಜೆಯ ಘನತೆ.

ಖಾತ್ರಿಯಿಲ್ಲ ಪಿಸುಮಾತುಗಳ ಗೌಪ್ಯತೆ !


ಈ ರಣಬಿಸಿಲ ವಿಷವ್ಯೂಹದಲ್ಲಿ

ಸುತ್ತುತ್ತಿದ್ದೇವೆ ನಾವು ಯಾವ ಸುತ್ತು ?

ನಮಗಿಲ್ಲ ನಮ್ಮದೇ ನೆರಳೂ!


© 2021 AJ

Writing & Art

9th March 2021

Related Posts
Leave a Reply

Your email address will not be published.Required fields are marked *